30
August, 2026

A News 365Times Venture

30
Sunday
August, 2026

A News 365Times Venture

ನಟ ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ವಾ ? ಹೈಕೋರ್ಟ್ ಪ್ರಶ್ನೆ : ಅರ್ಜಿ ವಿಚಾರಣೆ ಮುಂದೂಡಿಕೆ

Date:

ಬೆಂಗಳೂರು,ಜೂನ್,13,2025 (www.justkannada.in): ತಮಿಳಿನಿಂದ ಕನ್ನಡ ಭಾಷೆ ಹುಟ್ಟಿತು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ  ನಟ ಕಮಲ್ ಹಾಸನ್ ನಟಿಸಿರುವ ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ಅನಧಿಕೃತ ನಿಷೇಧ ಹೇರಲಾಗಿದೆ. ಥಗ್ ಲೈಫ್’ ಸಿನಿಮಾ ರಿಲೀಸ್​ಗೆ ಭದ್ರತೆ ಕೋರಿ ಕಮಲ್ ಹಾಸನ್ ಅವರು ಕರ್ನಾಟಕ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರದ ವಿತರಣೆ ಮತ್ತು ಬಿಡುಗಡೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ಹೈಕೋರ್ಟ್​​ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರು ಅರ್ಜಿ ವಿಚಾರಣೆ ವೇಳೆ, ಕಮಲ್ ಹಾಸನ್​ ಇನ್ನೂ ಕ್ಷಮೆ ಕೇಳಿಲ್ಲವೇ? ಸುಪ್ರೀಂ ಕೋರ್ಟ್‌ ಏನಾಯಿತು ಎಂದು ​​​​​ ಕಮಲ್ ಪರ ವಕೀಲರಿಗೆ ಪ್ರಶ್ನಿಸಿತು.

ಕನ್ನಡ ಸಾಹಿತ್ಯ ಪರಿಷತ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಎಸ್‌ ಬಸವರಾಜು, ಕ್ಷಮೆ ಕೇಳಿಲ್ಲ. ಸುಪ್ರೀಂ ಕೋರ್ಟ್‌ ಇಂದು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆಯಷ್ಟೇ ಎಂದು ಪೀಠದ ಗಮನಕ್ಕೆ ತಂದರು. ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 20 ಕ್ಕೆ ಮುಂದೂಡಿದೆ.vtu

Key words: Kamal Haasan, apologize, High Court, Petition, hearing

The post ನಟ ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ವಾ ? ಹೈಕೋರ್ಟ್ ಪ್ರಶ್ನೆ : ಅರ್ಜಿ ವಿಚಾರಣೆ ಮುಂದೂಡಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ఇదేం ఫోన్ బాబోయ్.. బ్లాక్‌ అండ్‌ వైట్‌ నుంచి కలర్‌లోకి మారిపోతుంది..! Hisense A10 e-ink లాంచ్.!

Hisense A10 e-ink: స్మార్ట్‌ఫోన్ మార్కెట్‌లో ఎప్పటికప్పుడు కొత్త ప్రయోగాలు జరుగుతూనే...

ഇസ്രഈലി സ്ഥാപനവും വോക്‌സ്‌വാഗണും തമ്മിലെ സഹകരണം; കരാറിനെതിരെ ജര്‍മനിയില്‍ ഇടത് പാര്‍ട്ടികളുടെ പ്രതിഷേധം

ബെര്‍ലിന്‍: ഇസ്രയേല്‍ സര്‍ക്കാറിന്റെ ഉടമസ്ഥതയിലുള്ള പ്രതിരോധ സ്ഥാപനവുമായി സഹകരിക്കാനുള്ള വോക്‌സ്‌വാഗന്റെ നീക്കത്തിനെതിരെ...

ஆர்.எஸ்.எஸ்ஸின் நண்பர், விஷ்ணு ரெட்டியின் உறவினர்.. கிரண்குமார் ரெட்டி தமிழ்நாட்டின் ஆளுநரா?

தமிழ்நாட்டின் ஆளுநராக ஆந்திர முன்னாள் முதல்வர் கிரண்குமார் ரெட்டி நியமிக்கபட வாய்ப்புள்ளதாக...