27
October, 2026

A News 365Times Venture

27
Tuesday
October, 2026

A News 365Times Venture

ಮಠಗಳು ಸಮಾಜಕ್ಕೆ  ಸಂಸ್ಕಾರ ಕಲಿಸುವುದರ ಜೊತೆಗೆ ಶಿಕ್ಷಣವನ್ನು ನೀಡುವುದು ಸನ್ಮಾರ್ಗದ ಮೂಲ- ಸಚಿವ ಕೆ.ಹೆಚ್ ಮುನಿಯಪ್ಪ.

Date:

ಆಂಧ್ರ ಪ್ರದೇಶ. ಮೇ,29,2025 (www.justkannada.in): ಮಠಗಳು ಸಮಾಜಕ್ಕೆ  ಸಂಸ್ಕಾರ ಕಲಿಸುವುದರ ಜೊತೆಗೆ ಶಿಕ್ಷಣವನ್ನು ನೀಡುವುದು ಸನ್ಮಾರ್ಗದ ಮೂಲ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ನುಡಿದರು.

ಮಾತಾಂಗ ಮಹಾಪೀಠದ  ಶಿಲಾಶಾಸನ ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ಅವರು ಭಾಗವಹಿಸಿ ಮಾತನಾಡಿದರು.

ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀ ನರಸಿಂಹ ಪೀಠಾಧಿಪತಿ ಶ್ರೀ.ಶ್ರೀ.ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಸಂಕಲ್ಪದಂತೆ ಅನ್ನಮಯ್ಯ ಜಿಲ್ಲೆಯ ಲಕ್ಕಿರೆಡ್ಡಿಪಲ್ಲಿ ದೇವರಚೆರುವು ಬಳಿ ಶ್ರೀ ಮಾತಂಗ ಮಹಾ ಪೀಠದ ಶಿಲಾಶಾಸನ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ, ವೈಭವದೊಂದಿಗೆ ನೆರವೇರಿದ್ದು. ಪ್ರಥಮ ಬಾರಿಗೆ ಮಾತಾಂಗ ಮಹಾ ಪೀಠದ ನಿರ್ಮಾಣ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಎಲ್ಲಾ ಜಾತಿಗಳನ್ನು ಸಮಾನವಾಗಿ ನೋಡುವದರೊಂದಿಗೆ ಸನ್ಯಾಸ ದೀಕ್ಷೆ ಮತ್ತು ಮಠ ನಿರ್ಮಾಣಕ್ಕೆ ಆಶೀರ್ವಾದ ನೀಡಿದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗೆ  ಕೃತಜ್ಞತೆ ಸಲ್ಲಿಸಿದರು.

ರಾಜಕೀಯಕ್ಕೂ ಮೀರಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಠಗಳು ಸಮಾಜಕ್ಕೆ ಸಂಸ್ಕಾರ ಕಲಿಸುವುದರ ಜೊತೆಗೆ ಸರಿಯಾದ ಶಿಕ್ಷಣವನ್ನು ನೀಡುವುದೇ ಸನ್ಮಾರ್ಗಕ್ಕೆ ಮೂಲ ಎಂದು ಹೇಳಿದರು.

ಮಠವು ಒಂದು ವರ್ಷದೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು ವೇದಗಳು ಮತ್ತು ಉಪನಿಷತ್ತನ್ನು ಅಧ್ಯಯನ ಮಾಡುವವರು ಮತ್ತು ಬೋಧಿಸುವ ಪಂಡಿತರಿಗೆ ಇಲ್ಲಿಗೆ ಆಹ್ವಾನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಚಾರ ಹಾಗೂ ಸಂಸದೀಯ ವ್ಯವಹಾರಗಳ  ಸಚಿವ ಎಲ್.ಮುರಗನ್,  ತೆಲಂಗಾಣ ಸರ್ಕಾರದ  ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ  ದಾಮೋದರ ರಾಜನರಸಿಂಹ,  ಭುವನೇಶ್ವರ ಪೀಠದ ಪೀಠಾಧಿಪತಿ ಶ್ರೀ ಕಮಲಾನಂದ ಭಾರತೀ ಮಹಾಸ್ವಾಮಿಗಳು, ಬ್ರಹ್ಮಂಗಾರಿ ಮಠದ ಶ್ರೀ ಅಚಲಾನಂದ ಆಶ್ರಮದ ಶ್ರೀ ವಿರಜಾನಂದ ಸ್ವಾಮಿಗಳು, ಮತ್ತು  ಮಾತಾಂಗ ಮಹಾ ಪೀಠಾಧಿಪತಿ ಶ್ರೀ ಮಾತಾಂಗಾನಂದಗಿರಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

Key words: mutt, goodness, educate, society, Minister, K.H. Muniyappa.

The post ಮಠಗಳು ಸಮಾಜಕ್ಕೆ  ಸಂಸ್ಕಾರ ಕಲಿಸುವುದರ ಜೊತೆಗೆ ಶಿಕ್ಷಣವನ್ನು ನೀಡುವುದು ಸನ್ಮಾರ್ಗದ ಮೂಲ- ಸಚಿವ ಕೆ.ಹೆಚ್ ಮುನಿಯಪ್ಪ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എതിര്‍പ്പുകളെ അവഗണിച്ച് കേന്ദ്രം; പൂര്‍ണമായും എഥനോളില്‍ ഓടുന്ന വാഹനങ്ങള്‍ക്ക് അനുമതി, മോട്ടോര്‍ വെഹിക്കിള്‍ റൂള്‍സിലും ഭേദഗതി

ന്യൂദല്‍ഹി: പൂര്‍ണമായും എഥനോള്‍ ഇന്ധനമായി ഉപയോഗിച്ച് പ്രവര്‍ത്തിക്കുന്ന വാഹനങ്ങള്‍ക്ക് രാജ്യത്ത് നിരത്തിലിറങ്ങാന്‍...

“ஒரே நாளில் 17 கைதிகள் சிறையிலிருந்து தப்பிச் செல்லும் அவலநிலை நிலவுகிறது” – கனிமொழி சாடல்!

தூத்துக்குடி விமான நிலையத்தில் செய்தியாளர்களைச் சந்தித்த தூத்துக்குடி மக்களவைத் தொகுதி உறுப்பினர்...

Harmanpreet Kaur: ఇంట్లో రోజుకు మూడుసార్లు ప్రాక్టీస్ చేసేదాన్ని.. సెంచరీ వెనుక ఉన్న రహస్యం ఇదే..

భారత మహిళా క్రికెట్ జట్టు మాజీ కెప్టెన్ హర్మన్ ప్రీత్ కౌర్...

ഡാറ്റാ പ്രൊട്ടക്ഷന്‍ നിയമം: മാധ്യമസ്ഥാപനങ്ങളുടെ ഹരജിയില്‍ കേന്ദ്രത്തിന് സുപ്രീംകോടതി നോട്ടീസ്

ന്യൂദല്‍ഹി: ഡിജിറ്റല്‍ പേഴ്‌സണല്‍ ഡാറ്റാ പ്രൊട്ടക്ഷന്‍ (ഡി.പി.ഡി.പി) നിയമത്തിനെതിരായ ഹരജിയില്‍ കേന്ദ്ര...