18
March, 2026

A News 365Times Venture

18
Wednesday
March, 2026

A News 365Times Venture

ನಟ ಕಮಲ್ ಹಾಸನ್ ಕ್ಷಮೆ ಕೇಳದಿದ್ದರೇ ಅವರನ್ನ ನಿಷೇಧಿಸಬೇಕು-ಸಚಿವ ಶಿವರಾಜ್ ತಂಗಡಗಿ

Date:

ಬೆಂಗಳೂರು,ಮೇ,28,2025 (www.justkannada.in):  ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್  ವಿರುದ್ದ ಪಕ್ಷಾತೀತವಾಗಿ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಈ ಕುರಿತು ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ನಟ ಕಮಲ್ ಹಾಸನ್ ರಾಜ್ಯದ ಜನತೆ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ಅವರನ್ನ ನಿಷೇಧಿಸಲಿ ಎಂದು ಆಗ್ರಹಿಸಿದರು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ನಟ ಕಮಲ್ ಹಾಸನ್ ಆ ರೀತಿ  ಹೇಳಿದ್ದು ಬಹಳ ತಪ್ಪು. ನೆಲ,ಜಲ, ಭಾಷೆ ಬಗ್ಗೆ ಮಾತನಾಡೋದು ತಪ್ಪು.  ಕಮಲ್ ಹಾಸನ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ  ನಿಷೇಧಿಸಬೇಕು.  ಫಿಲಂ ಚೇಂಬರ್ ಗೆ ಪತ್ರ ಬರೆಯುತ್ತೇನೆ ಎಂದರು.

ಕನ್ನಡ ನೆಲ, ಜಲದ ವಿಷಯ ಯಾರೇ ಮಾತನಾಡಿದರೂ ಸಹಿಸೋಕೆ ಆಗಲ್ಲ. ಕನ್ನಡದ ಬಗ್ಗೆ ಹಗುರವಾಗಿ ಮಾತಾಡೋದು ಬಿಟ್ಟು ಕ್ಷಮೆ ಕೇಳಬೇಕು. ಹೀಗೆ ಮಾತಾಡಿ ಗಾಯಕ ಸೋನು ನಿಗಮ್ ಕ್ಷಮೆ ಕೇಳಿದ್ದಾರೆ. ಅದರಂತೆ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳದೇ ಹೋದರೇ ಅವರನ್ನ ಬ್ಯಾನ್ ಮಾಡಬೇಕು. ಕಮಲ್ ಹಾಸನ್ ಮಾತನಾಡುವಾಗ ನಟ ಶಿವರಾಜ್ ಕುಮಾರ್ ಅಲ್ಲೇ ಇದ್ದರೂ ಅದನ್ನ ವಿರೋಧ ಮಾಡಲಿಲ್ಲ. ಶಿವರಾಜ್ ಕುಮಾರ್ ಈಗಲಾದರೂ ಖಂಡಿಸಲಿ ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದರು.vtu

Key words:  actor, Kamal Haasan, apologize, Minister, Shivraj Thangadgi

The post ನಟ ಕಮಲ್ ಹಾಸನ್ ಕ್ಷಮೆ ಕೇಳದಿದ್ದರೇ ಅವರನ್ನ ನಿಷೇಧಿಸಬೇಕು-ಸಚಿವ ಶಿವರಾಜ್ ತಂಗಡಗಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Pinnelli Ramakrishna Reddy: పిన్నెల్లి రామకృష్ణారెడ్డికి భారీ ఊరట.. బెయిల్ మంజూరు

Pinnelli Ramakrishna Reddy: వైఎస్‌ఆర్‌ కాంగ్రెస్‌ పార్టీ సీనియర్‌ నేత, మాజీ...

ಹೊಸ ಬಸ್ ಖರೀದಿಗೆ ಟೆಂಡರ್: ಕೊರತೆ ಇರುವ ಕಡೆ ಬಸ್ ಗಳನ್ನು ಒದಗಿಸುತ್ತೇವೆ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಮಾರ್ಚ್,18,2026 (www.justkannada.in): ನಾವು ಬಂದ ಮೇಲೆ ಸುಮಾರು 6 ಸಾವಿರ...

‘ആത്മാര്‍ത്ഥമായി നന്ദി പറയുന്നു’; മെഡിക്കല്‍ സഹായവുമായി ഇന്ത്യയുടെ ആദ്യ കപ്പല്‍ ഇറാനില്‍

ടെഹ്‌റാന്‍: പശ്ചിമേഷ്യന്‍ സംഘര്‍ഷത്തിനിടെ മെഡിക്കല്‍ സഹായവുമായി ഇന്ത്യയുടെ ആദ്യ കപ്പല്‍ ഇറാനിലെത്തി....

'உயிரோடு தான் இருக்கிறேன்' – நிரூபிக்க போராடும் நெதன்யாகு: வீடியோக்களும், சர்ச்சைகளும்! |Full Detail

இஸ்ரேல் பிரதமர் நெதன்யாகு உயிரோடு இருக்கிறாரா... இல்லையா?- இது தற்போது ஈரான்...