12
March, 2026

A News 365Times Venture

12
Thursday
March, 2026

A News 365Times Venture

ದಕ್ಷಿಣ ವಲಯ ಬಿಇಒ ಸಿಎನ್ ರಾಜು ಕಾರ್ಯಕ್ಷಮತೆಗೆ ರಾಜ್ಯ ಯೋಜನಾ ನಿರ್ದೇಶಕರ ಮೆಚ್ಚುಗೆ

Date:

 

ಮೈಸೂರು, ಮೇ ೨೦,೨೦೨೫:  ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು ಅವರು ರೂಪಿಸಿದ್ದ ವಿಶೇಷ ಶೈಕ್ಷಣಿಕ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಯೋಜನಾ ನಿರ್ದೇಶಕರು, ಜಿಲ್ಲೆಯಲ್ಲಿ ಮಾಡಿರುವ ಬೆಸ್ಟ್ ಪ್ರಾಕ್ಟಿಸ್ ಗಳನ್ನು  ಯೋಜನೆಯಲ್ಲಿ ಸೇರಿಸಲು  ರಾಜ್ಯ ಹಂತದ ನಿರ್ದೇಶಕರುಗಳಿಗೆ  ಸೂಚಿಸಿದರು.

ಡಯಟ್‌ ನಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕ ಡಾ. ಕುರ್ಮಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ 2023 -24 ಹಾಗೂ 2024- 25 ನೇ ಸಾಲಿನಲ್ಲಿ ರೂಪಿಸಿದ್ದ  ವಿಶೇಷವಾದ ಶೈಕ್ಷಣಿಕ ಯೋಜನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎನ್ ರಾಜು  ಮೈಸೂರು ಜಿಲ್ಲೆಯ ಪರವಾಗಿ ಪ್ರಸ್ತುತಪಡಿಸಿದರು.

  1. ದಿನಗಳು 50 ಕಲಿಕಾ ಸಂಪತ್ತು , 2. ಕಲಿಕಾ ಖಾತ್ರಿ ಪರೀಕ್ಷೆಗಳು , 3. ಭಾಷಾ ಪ್ರಯೋಗಾಲಯಗಳು
  2. ನಾನು ಓದುತ್ತಿದ್ದೇನೆ(5 ರಿಂದ 10ನೆ ತರಗತಿ) , 5. ಕಲಿಕಾಮೃತ ( ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ )
  3. English Empowerment Program (EEP) 7. English Fest.

ಈ  ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ಪಿಪಿಟಿ ಮೂಲಕ  ಸಭೆಗೆ ವಿವರಣೆ ನೀಡಿದರು. ಇದರಿಂದ ಉತ್ತೇಜಿತರಾಗಿ ಜಿಲ್ಲೆಯಲ್ಲಿ ಮಾಡಿರುವ ಬೆಸ್ಟ್ ಪ್ರಾಕ್ಟಿಸ್ ಗಳನ್ನು  ಯೋಜನೆಯಲ್ಲಿ ಸೇರಿಸಲು  ರಾಜ್ಯ ಹಂತದ ನಿರ್ದೇಶಕರುಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.

ಈ ಕಾರ್ಯಕ್ರಮಗಳ ಫಲವಾಗಿ ಈ ಬಾರಿ ಎಸ್.ಎಸ್. ಎಲ್. ಸಿ ಫಲಿತಾಂಶದಲ್ಲಿ ಜಿಲ್ಲೆಗೆ  ಮೈಸೂರು ದಕ್ಷಿಣ ವಲಯ ಶೇಕಡ 79.83 ಫಲಿತಾಂಶ  ಪಡೆದು ಅಗ್ರಸ್ಥಾನದಲ್ಲಿದೆ.

ಮೈಸೂರು ದಕ್ಷಿಣ ವಲಯ ಬಿಇಒ ರಾಜು ಅವರ ಕಾರ್ಯಕ್ರಮಗಳ ಸಾಧನೆಯ ನೋಡಿ ಮೈಸೂರು ವಿಭಾಗದ ಎಲ್ಲಾ ಉಪನಿರ್ದೇಶಕರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪ್ರ ಸಂಶೆ ವ್ಯಕ್ತಪಡಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಮಾದೇಗೌಡ, ಮಾರುತಿ, ಸಹ ನಿರ್ದೇಶಕ ಪಾಂಡುರಂಗ, ಗೀತಾಂಬ (ಪ್ರಾಂಶುಪಾಲರು ಸಿಟಿಇ), ರಾಜ್ಯ ಅಕ್ಷರ ದಾಸೋಹ ನಿರ್ದೇಶಕರು, ರಾಜ್ಯ ಮುಖ್ಯ ಲೆಕ್ಕಾಧಿಕಾರಿಗಳು   ಮುಖ್ಯ ಅಭಿಯಂತರರು ಹಾಗೂ ಮೈಸೂರು ವಿಭಾಗದಿಂದ ಭಾಗವಹಿಸಿದ್ದ ಎಂಟು ಜಿಲ್ಲೆಗಳ ಉಪ ನಿರ್ದೇಶಕರು ಹಾಜರಿದ್ದರು.

key words: The Southern Zone BEO, C.N. Raju, appreciated, state project director, Mysore

vtu

The Southern Zone BEO C.N. Raju is appreciated by the state project director for his efficiency.

The post ದಕ್ಷಿಣ ವಲಯ ಬಿಇಒ ಸಿಎನ್ ರಾಜು ಕಾರ್ಯಕ್ಷಮತೆಗೆ ರಾಜ್ಯ ಯೋಜನಾ ನಿರ್ದೇಶಕರ ಮೆಚ್ಚುಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಶಾಸಕ ಭೈರತಿ ಬಸವರಾಜುಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು,ಮಾರ್ಚ್,12,2026 (www.justkannada.in): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ...

മിനാബിലെ പ്രൈമറി സ്‌കൂളിൽ നടന്ന ആക്രമണം മാപ്പർഹിക്കാത്ത യുദ്ധക്കുറ്റം; ഉത്തരവാദികൾ ശിക്ഷിക്കപ്പെടാതെ പോകില്ല: ഇറാൻ

ഇസ്താംബുൾ: ഇറാനിലെ മിനാബിൽ പെൺകുട്ടികളുടെ സ്കൂളിന് നേരെ അമേരിക്കയും ഇസ്രഈലും നടത്തിയ...

'தேமுதிகவுக்காக எதுக்கு தியாகம் பண்ணணும்?' – எரிச்சலில் கூட்டணி கட்சிகள்; அறிவாலயத்தின் ப்ளான் என்ன?

கூட்டணி கட்சிகளிடம், தொகுதிகளை குறைத்துக் கொள்ள சொல்லி வலியறுத்திக் கொண்டிருக்கிறது அறிவாலயம்....

LPG crisis: ఎల్‌పీజీ సంక్షోభం.. తగ్గిన స్విగ్గీ, జొమాటో డెలివరీలు..

LPG crisis: మిడిల్ ఈస్ట్ యుద్ధం భారతదేశంపై తీవ్ర ప్రభావం చూపిస్తున్నాయి....