12
March, 2026

A News 365Times Venture

12
Thursday
March, 2026

A News 365Times Venture

ಭಾರೀ ಮಳೆ ಹಿನ್ನೆಲೆ ಹೊಸೂರು ಹೆದ್ದಾರಿ ಸಂಪೂರ್ಣ ಜಾಮ್: ವಾಹನ ಸವಾರರ ಪರದಾಟ

Date:

ಬೆಂಗಳೂರು ,ಮೇ,20,2025 (www.justkannadda.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು ಈ  ಹಿನ್ನಲೆಯಲ್ಲಿ ಹೊಸೂರು ಹೆದ್ದಾರಿ ಸಂಪೂರ್ಣ ಜಾಮ್ ಆಗಿ ವಾಹನ ಸವಾರರು ಪರದಾಟ ನಡೆಸುತ್ತಿರುವ ಸ್ಥಿತಿ ಉಂಟಾಗಿದೆ.

ಬೆಂಗಳೂರು -ಹೊಸೂರು ಮುಖ್ಯರಸ್ತೆಯ ತಿರುಮಗೊಂಡನಹಳ್ಳಿ ಬಳಿ ಜಾಮ್ ಆಗಿದ್ದು ನಾಲ್ಕು ಗಂಟೆಗಳಿಂದ ವಾಹನಗಳು ನಿಂತಲೇ ನಿಂತಿವೆ. ರಸ್ತೆಯಲ್ಲಿ ನಾಲ್ಕು ಅಡಿ ಮಳೆ ನೀರು ನಿಂತಿದ್ದು,  ಭಾರತ್ ಮಾಲಾ ರಸ್ತೆ ನಿರ್ಮಿಸುತ್ತಿರುವವರ ಯಡವಟ್ಟಿನಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮಗಾರಿ ವೇಳೆ ರಾಜಕಾಲುವೆಗಳಿಗೆ ಮಣ್ಣು ಹಾಕಿರುವವುದರಿಂದ ಹೆದ್ದಾರಿಯಲ್ಲೇ ನೀರು ನಿಂತು ಈ ಅವಾಂತರ ಸೃಷ್ಠಿಯಾಗಿದೆ.  ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದೀಗ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ವಾಹನಗಳ ಮಳೆ ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿವೆ. ಸವಾರರು ಮತ್ತು ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆಗೆ ಸ್ಪಂದಿಸಿ ಸರಿಪಡಿಸುವ ಕೆಲಸ ಆಗುತ್ತದೆ- ಸಚಿವ ದಿನೇಶ್ ಗುಂಡೂರಾವ್

ಮಳೆಯಿಂದಾಗಿರುವ ಅವಾಂತರದ ಬಗ್ಗೆ ಆನೇಕಲ್ ನಲ್ಲಿ ಮಾತನಾಡಿರುವ  ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ದೊಡ್ಡನಗರ ಕೆಲವು ಭಾಗದಲ್ಲಿ ಈ ರೀತಿಯಾಗುತ್ತೆ. ಮಳೆ ಬಂದಾಗ ಸಮಸ್ಯೆ ಆಗುತ್ತೆ, ಆಗೋದಿಲ್ಲ ಅಂತ ಹೇಳೋಕೆ ಆಗಲ್ಲ. ಆ ಸಮಸ್ಯೆಗೆ ಸ್ಪಂದಿಸಿ ಸರಿಪಡಿಸುವ ಕೆಲಸ ಆಗುತ್ತದೆ. ಆಡಳಿತ ಮಾಡುತ್ತಿರುವುದು ನಾವಾಗಿರುವುದರಿಂದ ಟೀಕೆಗಳನ್ನ ಸ್ವೀಕಾರ ಮಾಡುತ್ತೇವೆ. ಸಮಸ್ಯೆ ಸರಿಪಡಿಸೋ ಕೆಲಸ ಮಾಡುತ್ತೇವೆ ಎಂದರು.

ಬಿಬಿಎಂಪಿ ಮತ್ತು ಇತರೆ ಇಲಾಖೆಗಳಿಂದ ಸಮಸ್ಯೆ ಆಗಿರುವ ಕಡೆ ಸರಿಪಡಿಸಲಾಗುತ್ತೆ. ಪ್ರವಾಹವಾಗಿರೋ ಕಡೆ ಕಾರಣ ಹುಡುಕಿ ಮತ್ತೆ ಆಗದೆ ಇರೋ ಹಾಗೆ ವ್ಯವಸ್ಥೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರ ಇದ್ದಂತಹ ಸಂಧರ್ಭದಲ್ಲಿ ಕೂಡ ಈ ರೀತಿ ಸಮಸ್ಯೆ ಎದುರಾಗಿತ್ತು. ಬೋಟ್ ಗಳಲ್ಲಿ ಜನರು ಓಡಾಡುವಷ್ಟು ಸಮಸ್ಯೆ ಆಗಿತ್ತು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ವೈಜ್ಞಾನಿಕವಾಗಿ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಲಾಗುತ್ತೆ. ವಿರೋಧಪಕ್ಷವಾಗಿ ಬಿಜೆಪಿಯವರು ಟೀಕೆ ಮಾಡ್ತಾರೆ ಎಂದರು.

Key words: Hosur highway, completely, jammed, heavy rain

The post ಭಾರೀ ಮಳೆ ಹಿನ್ನೆಲೆ ಹೊಸೂರು ಹೆದ್ದಾರಿ ಸಂಪೂರ್ಣ ಜಾಮ್: ವಾಹನ ಸವಾರರ ಪರದಾಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಒಳಮೀಸಲಾತಿ ಜಾರಿಗೆ ಬದ್ದ: ಒತ್ತಡ ಹಾಕುವ ಅವಶ್ಯಕತೆ ಇಲ್ಲ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,11,2026 (www.justkannada.in): ಒಳ ಮೀಸಲಾತಿ ಗೊಂದಲದಿಂದಾಗಿ ನೇಮಕಾತಿಗಳಿಗೆ ತಡೆ ಬಿದ್ದಿದ್ದು...

ബത്തേരിയിലെ ശുചീകരണ തൊഴിലാളികളെ പിരിച്ചുവിടാന്‍ യു.ഡി.എഫ് ഭരണസമിതി; പ്രതിഷേധം

ബത്തേരി: സുല്‍ത്താന്‍ ബത്തേരിയിലെ ശുചീകരണ തൊഴിലാളികളെ പിരിച്ചുവിടാന്‍ യു.ഡി.എഫ് ഭരണസമിതിയുടെ നീക്കം....

`மக்கள் திமுக அரசை தூக்கி எறிய விரும்புகிறார்கள்; NDA மட்டுமே…' – திருச்சியில் பிரதமர் மோடி உரை

தமிழ்நாடு சட்டமன்றத் தேர்தலுக்கான களம் பரபரக்கிறது. தொடர்ந்து முக்கிய அரசியல் கட்சித்...

Interest Rates Hike: ఆ బ్యాంక్‌లో లోన్ తీసుకున్న వారికి బిగ్‌షాక్..పెరగనున్న వడ్డీ రేట్లు..

సొంత ఇల్లు కట్టుకోవాలన్నా లేదా వ్యాపారాన్ని విస్తరించాలన్నా చాలామంది బ్యాంక్ రుణాలపైనే...