16
March, 2026

A News 365Times Venture

16
Monday
March, 2026

A News 365Times Venture

ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿದ ಅವಳಿ ಚಿತ್ರಮಂದಿರ

Date:

ಮೈಸೂರು,ಮಾರ್ಚ್,5,2025 (www.justkannada.in): ಮೈಸೂರಿನ  ವಿದ್ಯಾರಣ್ಯಪುರಂನಲ್ಲಿರುವ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರವನ್ನು ನೆಲಸಮ ಮಾಡಲಾಗಿದ್ದು, ಇದೀಗ ಈ ಎರಡು ಚಿತ್ರಮಂದಿರಗಳು ಇತಿಹಾಸದ ಪುಟ ಸೇರಿವೆ.

ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರಗಳಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಕನ್ನಡದ ಹಲವಾರು ಜನಪ್ರಿಯ ಚಿತ್ರಗಳು ಪ್ರದರ್ಶನ ಕಂಡಿದ್ದವು. ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್  ಸಿನಿಮಾಗಳು ಸಹ ಈ ಅವಳಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು.

ಆದರೆ ಕೋವಿಡ್ ಬಳಿಕ ಈ ಅವಳಿ ಚಿತ್ರಮಂದಿರ‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದವು. ದಿ‌ನ ಕಳೆದಂತೆ ಬಂದ್ ಆಗಿದ್ದ ಅವಳಿ ಚಿತ್ರಮಂದಿರವನ್ನ ಇದೀಗ ನೆಲಸಮ ಮಾಡಲಾಗಿದೆ. ಮೈಸೂರಿನಲ್ಲಿ ಈಗಾಗಲೇ ರಣಜಿತ್, ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ ಚಿತ್ರಮಂದಿರಗಳು ನೆಲಸಮಗೊಂಡಿವೆ. ಇತ್ತೀಚೆಗೆ  ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳನ್ನೂ ನೆಲಸಮ ಮಾಡಲಾಗಿತ್ತು.  ಅವುಗಳ ಸಾಲಿಗೆ ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿಗಳು ಸೇರಿದ್ದು ವಿಪರ್ಯಾಸವೆನಿಸಿದೆ.

ಅವಳಿ ಚಿತ್ರಮಂದಿರ ‌ಧರಾಶಾಹಿಯಾಗಿದ್ದನ್ನು ಕಣ್ಣಾರೆ ಕಂಡ ಸಿನಿ ರಸಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮೈಸೂರಿನಲ್ಲೀಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಇವೆ.  ಅವುಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ಸಿನಿಮಾ ಪ್ರೇಕ್ಷಕರ ಆಶಯವಾಗಿದೆ.

Key words: Sterling, Skyline,  Theaters, history ,  Mysore

The post ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿದ ಅವಳಿ ಚಿತ್ರಮಂದಿರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

பேராவூரணி தொகுதியை கூட்டணிக்கு தரமாட்டார் எடப்பாடி! – அதிமுக வேட்பாளர் ரேஸில் முந்துவது யார்?

தஞ்சாவூர் மாவட்டத்தில் உள்ள எட்டு சட்டமன்றத் தொகுதிகளில் ஒன்று பேராவூரணி. கடமைடை...

Nepali Gang : అన్నం పెట్టిన ఇంటికే కన్నం వేశారు..

హైదరాబాద్‌లో నేపాలీ గ్యాంగ్ మరోసారి రెచ్చిపోయింది. జస్ట్ ఇంట్లో పని మనుషులుగా...

ಮೊಬೈಲ್ ಕ್ಯಾಂಟಿನ್ ಗೆ ಸಹಾಯಧನ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು ಗ್ರಾಮಾಂತರ, ಮಾರ್ಚ್,16,2026 (www.justkannada.in): ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ...

സി.പി.ഐ.എം വിട്ട് ടി.കെ. ഗോവിന്ദന്‍; തളിപ്പറമ്പില്‍ പി.കെ. ശ്യാമളക്കെതിരെ മത്സരിക്കും

കണ്ണൂര്‍: സ്ഥാനാര്‍ത്ഥി പ്രഖ്യാപനത്തിന് പിന്നാലെ പാര്‍ട്ടി വിട്ട് കണ്ണൂരിലെ മുതിര്‍ന്ന സി.പി.ഐ.എം...