26
June, 2026

A News 365Times Venture

26
Friday
June, 2026

A News 365Times Venture

ಯುವಕನಿಂದ ಚಾಮುಂಡಿ ಬೆಟ್ಟದ ಅರ್ಚಕರ ಮೇಲೆ ಹಲ್ಲೆ

Date:

ಮೈಸೂರು,ಫೆಬ್ರವರಿ,14,2025 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟ ದೇವಾಲಯದ ಅರ್ಚಕ  ದೇವಪ್ರಸಾದ್ ದೀಕ್ಷಿತ್  ಅವರ  ಮೇಲೆ ಯುವಕನೊಬ್ಬ ಹಲ್ಲೆ ಮಾಡಿ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.

ಸಿದ್ದಾರ್ಥ ಬಡಾವಣೆಯ ಶಾಂತಲಾ ಶಾಲೆ ಮುಖ್ಯಸ್ಥ ಪ್ರೊ. ಸಂತೋಷ್ ಮಗ ಸಿದ್ದಾಂತ್  ಎಂಬಾತ ಅರ್ಚಕ ದೇವಪ್ರಸಾದ್ ದೀಕ್ಷಿತ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ದೇವಪ್ರಸಾದ್ ದೀಕ್ಷಿತ್  ಅವರ ಕುಟುಂಬ ಮೈಸೂರಿನ‌ ಸಿದ್ದಾರ್ಥ ನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದು,  ಅದೇ ಬಡಾವಣೆಯಲ್ಲಿ ಪ್ರೊ. ಸಂತೋಷ್ ಕುಟುಂಬ ಸಹ ಇದೆ.

ಈ ಮಧ್ಯೆ ಸಿದ್ದಾಂತ್  ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ಏಕಾಏಕಿ ದೇವಪ್ರಸಾದ್ ದೀಕ್ಷಿತ್ ಅವರ ಮನೆಗೆ ನುಗ್ಗಿ ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ಕೊಡದಿದ್ದಾಗ ದೇವಪ್ರಸಾದ್ ದೀಕ್ಷಿತ್ ಮುಖಕ್ಕೆ ಗುದ್ದಿ, ಗಾಯಗೊಳಿಸಿದ್ದು, ಆ ವೇಳೆಗೆ ಮನೆಗೆ ಬಂದ ದೇವಪ್ರಸಾದ್ ದೀಕ್ಷಿತ್ ಮಗ ಸುದೇವ್ ನೆರೆಹೊರೆಯವರ ಸಹಾಯ ಪಡೆದು ಸಿದ್ದಾಂತ್ ನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಮಗನ ಹುಚ್ಚಾಟದ ವಿಚಾರ ಗೊತ್ತಾಗಿ ಪ್ರೊ. ಸಂತೋಷ್ ಪತ್ನಿ ಹಾಗೂ ಸಿದ್ದಾಂತ್ ತಾಯಿಯು  ದೀಕ್ಷಿತ್ ರ ಮನೆಗೆ ಬಂದು ಗೋಳಾಡಿದ್ದಾರೆ. ಸಿದ್ದಾಂತ್ ತಾಯಿಯ ಗೋಳಾಟ ಕಂಡು ಮರುಗಿದ ದೇವ ಪ್ರಸಾದ್ ಕುಟುಂಬ ಫೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ್ದಾರೆ.

Key words: Drug addict, youth, Attack, priests, Chamundi Hills

The post ಯುವಕನಿಂದ ಚಾಮುಂಡಿ ಬೆಟ್ಟದ ಅರ್ಚಕರ ಮೇಲೆ ಹಲ್ಲೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എസ്.ഐ.ആര്‍ ഒരുവര്‍ഷം പിന്നിട്ടപ്പോള്‍ വോട്ടര്‍ പട്ടികയില്‍ നിന്ന് പുറത്താക്കിയത് ആറ് കോടിയോളം വോട്ടര്‍മാരെ

ന്യൂദല്‍ഹി: രാജ്യത്തെ തീവ്ര വോട്ടര്‍ പട്ടിക പുനപരിശോധന (എസ്.ഐ.ആര്‍) ഒരു വര്‍ഷം...

`கர்நாடக அரசின் பிராக்ஸி அரசா இந்த அரசு?' – ஜனநாயகன் பட தயாரிப்பாளர் நியமனத்திற்கு அதிமுக எதிர்ப்பு

தமிழ்நாடு அரசின் டெல்லி சிறப்புப் பிரதிநிதியாக ஜனநாயகன் திரைப்படத்தின் தயாரிப்பாளரான கே.வெங்கட...

Saikrishna Lockup Death: సాయికృష్ణ లాకప్ డెత్ కేసులో సిట్ దూకుడు.. మరో ఇద్దరు పోలీసుల కోసం గాలింపు!

విజయవాడలో సంచలనం సృష్టించిన సాయికృష్ణ లాకప్ డెత్ కేసు దర్యాప్తును ప్రత్యేక...

ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ

ಹಾಸನ,ಜೂನ್,26,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ...