19
March, 2026

A News 365Times Venture

19
Thursday
March, 2026

A News 365Times Venture

ಸಿರ್ಸಿ ವೃತ್ತದಿಂದ ಮತ್ತೊಂದು ಮೇಲ್ಸೇತುವೆ- ಡಿಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಮಾರ್ಚ್,17,2026 (www.justkannada.in):  ಚಾಮರಾಜಪೇಟೆ ಸಿರ್ಸಿ ಜಂಕ್ಷನ್‌ನಿಂದ ಬಿಎಚ್ ಇಎಲ್ ಕಿಮಕೋ ವೃತ್ತದವರೆಗೂ ಮೇಲ್ಸೇತುವೆ ವಿಸ್ತರಿಸಲು ಡಿಪಿಆರ್ ತಯಾರಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ನ  ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾ‌ರ್ ಅವರು, ಬೆಂಗಳೂರು ನಗರ ಹೃದಯ ಭಾಗ ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯಲ್ಲಿನ ಪ್ರತಿನಿತ್ಯ ಉಂಟಾಗುವ ವಾಹನದಟ್ಟಣೆ ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಏನೆಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಸಿರ್ಸಿ ಜಂಕ್ಷನ್ ನಿಂದ ಬಿಎಚ್‌ ಇಎಲ್ ಕಿಮಕೋ ವೃತ್ತದವರೆಗೂ ಮೇಲ್ಸೇತುವೆ ವಿಸ್ತರಿಸಲು 810 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿದ್ದು, ಆಡಳಿತಾತ್ಮಕ ಅನುಮೋದನೆ ಪರಿಶೀಲನೆಯಲ್ಲಿ ಇದೆ.

ಉಳಿದಂತೆ ನಾಯಂಡನಹಳ್ಳಿ ಮೇಲ್ಸೇತುವೆಯ ನಂತರ ರಾಜರಾಜೇಶ್ವರಿನಗರ ಮುಖ್ಯರಸ್ತೆ ಕಮಾನು ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ರಾಜರಾಜೇಶ್ವರಿನಗರ ಮುಖ್ಯರಸ್ತೆಯಿಂದ ಕಮಾನು ಭಾಗದಿಂದ ಕೆಂಗೇರಿ ರಸ್ತೆಯವರೆಗೂ 75 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

Key words: Another, flyover ,Bangalore Sirsi Circle, DCM, DK Shivakumar, K.Shivakumar

The post ಸಿರ್ಸಿ ವೃತ್ತದಿಂದ ಮತ್ತೊಂದು ಮೇಲ್ಸೇತುವೆ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

'ஈரானிடம் அணு ஆயுதம் இல்லை; கமேனி தன் இறப்பிற்கு பயப்படவில்லை!' – ஜோ கென்ட் 'பரபர' தகவல்கள்

"ஈரானுக்கு எதிரான அமெரிக்காவின் போர் இஸ்ரேலின் அழுத்தத்தால் தொடங்கப்பட்டது... மனசாட்சிக்கு விரோதமாக...

Ravichandran Ashwin: “బుమ్రా తర్వాత భారత్ పరిస్థితి ఏంటి?” టీమిండియాకు అశ్విన్ బిగ్ వార్నింగ్..

Ravichandran Ashwin: టీమిండియాలో జస్ప్రీత్ బుమ్రా పాత్రను ప్రత్యేకంగా చెప్పనవసరం లేదు....

ಉಪ ಚುನಾವಣೆ: ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ- ಡಿಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಮಾರ್ಚ್,18,2026 (www.justkannada.in):  ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ...

‘സ്ഥാനാര്‍ത്ഥിത്വം മാത്രമല്ല പ്രശ്‌നം, എന്റെ പ്രയാസം നേതൃത്വത്തെ അറിയിച്ചിട്ടുണ്ട്; ലീഗ് വിടുമെന്ന അഭ്യൂഹങ്ങളില്‍ രണ്ടത്താണി

മലപ്പുറം: മുസ്‌ലിം ലീഗ് നേതൃത്വവുമായുള്ള അതൃപ്തിയെത്തുടര്‍ന്ന് പാര്‍ട്ടി വിടുമെന്ന അഭ്യൂഹങ്ങളില്‍ പ്രതികരണവുമായി...