ಪಾಟ್ನಾ, ನವೆಂಬರ್,11,2025 (www.justkannada.in): ದೇಶದ ತೀವ್ರ ಗಮನ ಸೆಳೆದಿರುವ ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 60 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನವೆಂಬರ್ 6 ರಂದು ನಡೆದ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು 122 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ನಡೆದಿದ್ದು, ಮತದಾರರು ಸರದಿ ಸಾಲಿನಲ್ಲಿ ನಿಂತು ತಮ ಹಕ್ಕು ಚಲಾಯಿಸಿದ್ದಾರೆ.
ಮೊದಲ ಹಂತದ ಮತದಾನದ ವೇಳೆ ಶೇ 65.08 ರಷ್ಟು ಮತದಾನವಾಗಿತ್ತು. ಇದೀಗ ಇಂದು ಕೊನೆಯ ಹಂತದ ಮತದಾನದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 60 ರಷ್ಟು ವೋಟಿಂಗ್ ಆಗಿದೆ ಎನ್ನಲಾಗಿದೆ. ನವೆಂಬರ್ 14 ರಂದು ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದ್ದು ಎಲ್ಲರ ಚಿತ್ತ ನ.14ರ ಮೇಲಿದೆ.
Key words: Bihar, Assembly elections, voting
The post ಬಿಹಾರ ವಿಧಾನಸಭೆ ಚುನಾವಣೆ, ಕೊನೆಯ ಹಂತದ ಮತದಾನ: ಶೇ 60ರಷ್ಟು ವೋಟಿಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





