ಬೆಂಗಳೂರು,ನವೆಂಬರ್,4,2025 (www.justkannada.in): ಲಿಫ್ಟ್ ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಂದು ವಿಕೃತಿ ಮೆರೆದಿದ್ದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಪುಷ್ಪಲತಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಅಕ್ಟೋಬರ್ 31 ರಂದು ಈ ಘಟನೆ ನಡೆದಿತ್ತು. ಲಿಫ್ಟ್ ನಲ್ಲಿ ಮನೆ ಕೆಲಸದಾಕೆ ಪುಷ್ಪಲತಾ ಅಮಾನವೀಯ ಕೃತ್ಯ ಎಸಗಿದ್ದರು. ಲಿಫ್ಟ್ ನಲ್ಲಿ ನಾಯಿ ಮರಿಯನ್ನು ಎತ್ತಿ ನೆಲಕ್ಕೆ ಬಡಿದು ಸಾಯಿಸಿ ವಿಕೃತಿ ಮೆರೆದಿದ್ದಳು.
ನಾಯಿ ನೋಡಿಕೊಳ್ಳಲೆಂದೇ ಪುಷ್ಪಾಲತಾಳನ್ನು ನೇಮಿಸಲಾಗಿತ್ತು. ನಾಯಿ ಸಾಯಿಸಿದ ಬಳಿಕ ಲಿಫ್ಟ್ ಹೊರಗೆ ಹೋಗಿ ಬಿತ್ತು ಎಂದು ಪುಷ್ಪಾಲತಾ ಕಥೆ ಕಟ್ಟಿದ್ದಳು. ಈ ಬಗ್ಗೆ ಶ್ವಾನದ ಮಾಲಕಿ ಸೆಕ್ಯೂರಿಟಿ ಬಳಿ ವಿಚಾರಿಸಿದಾಗ ಘಟನೆ ಬಯಲಾಗಿದೆ.
ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಾಯಿಮರಿಯ ಮಾಲಕಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪುಷ್ಪಲತಾಳನ್ನ ಪೊಲೀಸರು ಬಂಧಿಸಿದ್ದಾರೆ.
Key words: Woman, arrested , killing, Dog
The post ನಾಯಿ ಮರಿ ನೆಲಕ್ಕೆ ಬಡಿದು ಕೊಂದು ವಿಕೃತಿ ಮೆರೆದಿದ್ದ ಮಹಿಳೆ ಅರೆಸ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





