ಮೈಸೂರು,ಅಕ್ಟೋಬರ್,25,2025 (www.justkannada.in): ಒಟ್ಟಿಗೆ ಸ್ನಾನ ಮಾಡುವ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ಅಕ್ಕ ತಂಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಗುಲ್ಫಾಮ್ (23), ಸಿಮ್ರಾನ್ ತಾಜ್(20) ಮೃತಪಟ್ಟವರು. ಗುಲ್ಫಾಮ್ , ಸಿಮ್ರಾನ್ ತಾಜ್ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದು ಈ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಇತ್ತ ಬಹಳ ಸಮಯವಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ.
ನಂತರ ಬಾಗಿಲು ಒಡೆದು ನೋಡಿದಾಗ ಗ್ಯಾಸ್ ಗೀಸರ್ ಸೋರಿಕೆಯಾಗಿರುವುದು ಕಂಡು ಬಂದಿದೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯದಲ್ಲೇ ಇಬ್ಬರು ಅಸುನೀಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Mysore, Sisters, dies, gas geyser, leak
The post ಗ್ಯಾಸ್ ಗೀಸರ್ ಸೋರಿಕೆಯಾಗಿ ಅಕ್ಕ ತಂಗಿ ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





