ಬೆಂಗಳೂರು,ಅಕ್ಟೋಬರ್,24,2025 (www.justkannada.in): “ರೇಷ್ಮೆ ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಸಿ. ಎನ್. ಮಂಜುನಾಥ್ ನುಡಿದರು.
ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿರುವ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕೇಂದ್ರ ರೇಷ್ಮೆ ಮಂಡಳಿ – ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಡಾ. ಸಿ. ಎನ್. ಮಂಜುನಾಥ್ ರವರು ಭಾಗವಹಿಸಿ ಮಾತನಾಡಿದರು.
ರೇಷ್ಮೆ ಕೃಷಿ ನಮ್ಮ ದೇಶದ ಗ್ರಾಮೀಣ ಆರ್ಥಿಕತೆಗೆ ಆಧಾರವಾಗಿದ್ದು, ಅನೇಕ ಕುಟುಂಬಗಳಿಗೆ ಸ್ಥಿರ ಆದಾಯ ಮತ್ತು ಉದ್ಯೋಗದ ಮೂಲವಾಗಿದೆ ಎಂದು ಹೇಳಿದರು. ಅವರು ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಮುಂದಾಗಬೇಕು, ಹೀಗೆ ಮಾಡಿದರೆ ರೈತರ ಆದಾಯ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸೂಚಿಸಿದರು.
ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ 50 ವರ್ಷಗಳ ಸಾಧನೆಯ ಈ ಸುವರ್ಣ ಕ್ಷಣದಲ್ಲಿ, ಕಳೆದ ಐದು ದಶಕಗಳಿಂದ ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಶ್ರಮ, ಪ್ರತಿಭೆ ಮತ್ತು ತ್ಯಾಗವನ್ನು ಅರ್ಪಿಸಿದ ಎಲ್ಲಾ ರೇಷ್ಮೆ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ರೇಷ್ಮೆ ಕೃಷಿಕರನ್ನು ಡಾ. ಮಂಜುನಾಥ್ ರವರು ಹೃದಯಪೂರ್ವಕವಾಗಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರು, ಪಿ. ಶಿವಕುಮಾರ್, (ಭಾ.ಆ.ಸೇ),ಸದಸ್ಯ (ಸಚಿವರು) ಮತ್ತು ಮುಖ್ಯ ಕಾರ್ಯನಿರ್ವಾಹಕರು, ಕೇಂದ್ರ ರೇಷ್ಮೆ ಮಂಡಳಿ, ಡಾ.ಎಸ್.ಮಂಥಿರಾಮೂರ್ತಿ, ನಿರ್ದೇಶಕರು (ತಾಂತ್ರಿಕ) ಮತ್ತು ನಿರ್ದೇಶಕರು, ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ,ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರು, ಇಡೀ ದೇಶದ ಅನೇಕ ವಿಜ್ಞಾನಿಗಳು ಹಾಗೂ ರೇಷ್ಮೆ ರೈತರು ಉಪಸ್ಥಿತರಿದ್ದರು.
Key words: Sericulture, backbone, rural economy, MP Dr. C. N. Manjunath
The post ರೇಷ್ಮೆ ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು- ಸಂಸದ ಡಾ. ಸಿ. ಎನ್. ಮಂಜುನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





