ಮೈಸೂರು, ಅಕ್ಟೋಬರ್, 23, 2025 (www.justkannada.in): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಅಕ್ಟೋಬರ್ 24 ಮತ್ತು 25ರಂದು ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.
ನಿಗದಿತ ದಿನಾಂಕಗಳಂದು ಸರ್ವರ್ ನಿರ್ವಹಣೆ ಇರುವುದರಿಂದ ಅಕ್ಟೋಬರ್ 24ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 25ರ ಮಧ್ಯಾಹ್ನ1 ಗಂಟೆಯವರೆಗೆ ಸೆಸ್ಕ್ ನ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಇನ್ನಿತರ ಆನ್ ಲೈನ್ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ.
ಪ್ರಮುಖವಾಗಿ ಸೆಸ್ಕ್ ವ್ಯಾಪ್ತಿಯ ಪ್ರದೇಶಗಳಾದ ಮೈಸೂರು, ನಂಜನಗೂಡು, ಹುಣಸೂರು, ಕೆ.ಆರ್. ನಗರ, ಮಂಡ್ಯ, ಮಳವಳ್ಳಿ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಮಡಿಕೇರಿ ವ್ಯಾಪ್ತಿಯ ಗ್ರಾಹಕರಿಗೆ ಆನ್ ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಸೆಸ್ಕ್ ಪ್ರಕಟಣೆಯಲ್ಲಿ ಕೋರಿದೆ.
Key words: CESC, online services, unavailable ,October 24 and 25
The post ಅ. 24 ಮತ್ತು 25ರಂದು ಸೆಸ್ಕ್ ಆನ್ ಲೈನ್ ಸೇವೆಗಳು ಅಲಭ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





