ನವದೆಹಲಿ,ಅಕ್ಟೋಬರ್,11,2025 (www.justkannada.in): ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಆರೋಪಿಯನ್ನ ರಾಜಸ್ಥಾನ ಗುಪ್ತಚರ ಇಲಾಖೆ ಬಂಧಿಸಿದೆ.
ಅಲ್ವಾರ್ ಜಿಲ್ಲೆಯ ಗೋವಿಂದಗಢ ನಿವಾಸಿ ಮಂಗತ್ ಸಿಂಗ್ ಬಂಧಿತ ಆರೋಪಿ 1923 ರ ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ಅಲ್ವಾರ್ ಕಂಟೋನ್ಮೆಂಟ್ ಪ್ರದೇಶದ ಬಳಿ ನಡೆದ ಕಣ್ಗಾವಲು ಕಾರ್ಯಾಚರಣೆಯ ಸಮಯದಲ್ಲಿ ಮಂಗತ್ ಅವರನ್ನು ಪರಿಶೀಲಿಸಲಾಗಿದ್ದು, ಅಲ್ಲಿ ಅವರ ಚಟುವಟಿಕೆಗಳು ಅನುಮಾನಾಸ್ಪದವಾಗಿ ಕಂಡುಬಂದಿದ್ದವು. ಇಶಾ ಶರ್ಮಾ ಎಂಬ ಪಾಕಿಸ್ತಾನಿ ಮಹಿಳೆ ಜೊತೆ ಸಂಪರ್ಕದಲ್ಲಿದ್ದು ಮಾಹಿತಿಯನ್ನ ರವಾನಿಸುತ್ತಿದ್ದ ಆರೋಪ ಕೇಳಿ ಬಂದಿದೆ.
Key words: Accused, spying, Pakistan ISI, arrested
The post ಪಾಕ್ ಐಎಸ್ ಐ ಪರ ಬೇಹುಗಾರಿಕೆ ಆರೋಪ : ಆರೋಪಿಯ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





