ಮಂಗಳೂರು,ಅಕ್ಟೋಬರ್,11,2025 (www.justkannada.in): ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದನೆ ಮಾಡಿದ ಆರೋಪದ ಮೇಲೆ ಮಲಯಾಳಂ ಹಿರಿಯ ನಟ ಜಯಕೃಷ್ಣನ್ ರನ್ನು ಮಂಗಳೂರಿನ ಉರ್ವಾ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ಮೇಲೆ ಜಯಕೃಷ್ಣನ್ ಸೇರಿ ಮೂವರ ವಿರುದ್ದ ದೂರು ದಾಖಲು ಮಾಡಲಾಗಿತ್ತು. ಈಗ ಉರ್ವಾ ಠಾಣಾ ಪೊಲೀಸರು ನಟ ಜಯಕೃಷ್ಣನ್ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಕಾರು ಬುಕ್ ಆಗಿದ್ದು ಈ ವೇಳೆ ಮುಸ್ಲಿಂ ಟೆರರಿಸ್ಟ್ ಎಂದೆಲ್ಲ ನಿಂದಿಸಿದ್ದಾರೆ ಎಂಬುದು ಕ್ಯಾಬ್ ಚಾಲಕ ಶಫೀಕ್ ಆರೋಪ. ‘ಮುಸ್ಲಿಂ ತೀರ್ವವಾದಿ, ಟೆರರಿಸ್ಟ್ ಅಂತಾ ಅಪಹಾಸ್ಯ ಮಾಡಿದ್ದಾರೆ. ಅವರಿಗೆ ಕಾರು ಬೇಡ. ಕ್ಯಾಬ್ ನವರನ್ನು ಆಟ ಆಡಿಸೋಕೆ ಈ ರೀತಿ ಮಾಡಿದ್ದಾರೆ’ ಎಂದು ಶಫೀಕ್ ದೂರಿದ್ದಾರೆ.
Key words: Malayalam actor, arrest, allegedly, abusing, cab driver
The post ಕ್ಯಾಬ್ ಚಾಲಕನಿಗೆ ‘ಟೆರರಿಸ್ಟ್’ ಎಂದು ನಿಂದನೆ ಆರೋಪ: ಮಲಯಾಳಂ ಹಿರಿಯ ನಟ ಅರೆಸ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





