28
March, 2026

A News 365Times Venture

28
Saturday
March, 2026

A News 365Times Venture

ಗಿಲ್ಕಿ ವೆಂಕಟೇಶ್ ಕೊಲೆ ಕೇಸ್ ನಲ್ಲಿ 6 ಜನರ ಬಂಧನ- ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್

Date:

ಮೈಸೂರು,ಅಕ್ಟೋಬರ್,10,2025 (www.justkannada.in):  ಮೈಸೂರಿನಲ್ಲಿ ಹಾಡ ಹಗಲೇ  ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರು ಜನರನ್ನ ಬಂಧನ ಮಾಡಿದ್ದೇವೆ ಎಂದು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ವೆಂಕಟೇಶ್ ಹತ್ಯೆಯಲ್ಲಿ 6 ಜನ ಭಾಗಿಯಾಗಿದ್ದಾರೆ. ಈಗಾಗಲೇ ಅವರನ್ನು ಅರೆಸ್ಟ್ ಮಾಡಿದ್ದೇವೆ. ಧ್ರುವ ಕುಮಾರ್ ಒಬ್ಬ ಮಂಡ್ಯ, ಉಳಿದ 5 ಜನ ಮೈಸೂರಿನವರು. ಹಾಲಪ್ಪ ಹಾಗೂ ಮೃತ ವೆಂಕಟೇಶ್ ನಡುವೆ ಶೀತಲ ಸಮರ ಇತ್ತು. ಒಂದೇ ಗ್ರೂಪ್ ಆದರೂ ಸಹ ನಾನಾ ನೀನಾ ಅನ್ನೋ ವಿಚಾರಕ್ಕೆ ಕೊಲೆ ಆಗಿದೆ. ಈ ಹಿಂದೆ ನಡೆದ ಕಾರ್ತಿಕ್ ಕೊಲೆಗೂ ಇದಕ್ಕೂ ಲಿಂಕ್ ಇದೆಯಾ ಅಂತ ನೋಡುತ್ತಿದ್ದೇವೆ.  ಸಣ್ಣ ಪುಟ್ಟ ಫೈನಾನ್ಸ್ ಮಾಡುತ್ತಿದ್ದ ಅಂತ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.

 ಬಾಲಕಿ ಅತ್ಯಾಚಾರ ಕೊಲೆ ಕೇಸ್: ಆರೋಪಿ ಅರೆಸ್ಟ್

ನಿನ್ನೆ ನಜರಾಬಾದ್ ಲಿಮಿಟ್ ಅಲ್ಲಿ ಅಪ್ರಾಪ್ತ ಬಾಲಕಿ  ಮೇಲೆ ಅತ್ಯಾಚಾರ ಕೊಲೆ ಆಗಿದೆ. ಇದರ ಸಂಬಂಧ ನಾವು ಆರೋಪಿ ಅರೆಸ್ಟ್ ಮಾಡಿದ್ದೇವೆ. ನಿನ್ನೆ ಆರೋಪಿ ಕರೆದುಕೊಂಡು ಬರುತ್ತಿದ್ದ ವೇಳೆ ಆರೋಪಿ ಸಿದ್ದಲಿಂಗಪುರ ಅಂತ ಹೇಳಿದ್ದಾನೆ. ಅಲ್ಲಿ ಕರೆದುಕೊಂಡು ಹೋದ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆ ಸಂದರ್ಭದಲ್ಲಿ ನಮ್ಮವರು ಗುಂಡು ಹಾರಿಸಿದ್ದಾರೆ. ಈತನ ಮೇಲೆ ಹಳೆಯ ಕೇಸ್ ಕೂಡ ಇದೆ. ಜಾಮೀನಿನ ಮೇಲೆ ಆತ ಹೊರಗಡೆ ಬಂದಿದ್ದ. ನಿನ್ನೆ ಮಗು ಮಲಗಿದ್ದ ವೇಳೆ ಎತ್ತುಕೊಂಡು ಹೋಗಿ ಕೃತ್ಯವೆಸಗಿದ್ದಾನೆ. ಆತ ಮಾದಕ ವ್ಯಸನಿ ಅಂತ ಗೊತ್ತಾಗಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ ಎಂದು  ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.

Key words:  Mysore, Gilki Venkatesh, Girl,  murder case, Police Commissioner, Seema Latkar

 

The post ಗಿಲ್ಕಿ ವೆಂಕಟೇಶ್ ಕೊಲೆ ಕೇಸ್ ನಲ್ಲಿ 6 ಜನರ ಬಂಧನ- ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

கோவைக்கு மாறிய செந்தில் பாலாஜி; அமைச்சருக்கு இடம் இல்லை! – திமுக வேட்பாளர் பட்டியல்! முழு விவரம்

தமிழக சட்டபேரவைத் தேர்தல் ஏப்ரல் 23 ஆம் தேதி நடைபெற இருக்கிறது....

Jayam Ravi: పెళ్లి కాలేదని చెప్పి ప్రియురాలితో గోవాలో ల్యాండ్ కొన్న స్టార్ హీరో?

కోలీవుడ్ స్టార్ హీరో జయం రవి, ఆయన భార్య ఆర్తీల విడాకుల...

ಪ್ರಚಾರದ ವೇಳೆ ಹೈಡ್ರಾಮಾ: ‘ಕೈ’ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ , ಪೊರಕೆ ಪ್ರದರ್ಶನ

ದಾವಣಗೆರೆ,ಮಾರ್ಚ್,28,2026 (www.justkannada.in):  ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣಾ ಕಣ ರಂಗೇರಿದ್ದು...

ഇറാനിലെ കരയുദ്ധം അമേരിക്കയെ ചെളിക്കുണ്ടിലാക്കും; വിയറ്റ്നാം ആവര്‍ത്തിക്കുമെന്ന മുന്നറിയിപ്പുമായി റഷ്യ

മോസ്‌കോ: ഇറാനെതിരായ ഏതൊരാക്രമണത്തിന്റെയും വിധി പരാജയമായിരിക്കുമെന്ന് അമേരിക്കയ്ക്ക് മുന്നറിയിപ്പുമായി റഷ്യന്‍ സുരക്ഷാ...