ಮೈಸೂರು,ಅಕ್ಟೋಬರ್,8,2025 (www.justkannada.in): ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರಸಭೆಗಳಲ್ಲಿ ನೇರ ಪಾವತಿಯಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ಪೌರಕಾರ್ಮಿಕ ಸಂಘವು ಮನವಿ ಸಲ್ಲಿಸಿತು.
ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕ ಸಂಘದ ಅಧ್ಯಕ್ಷಡಿ.ಆರ್.ರಾಜು ಮಾತನಾಡಿ, ಉಲ್ಲೇಖ(1)ರ ಸರ್ಕಾರದ ಪತ್ರದಲ್ಲಿ ಮಹಾನಗರ ಪಾಲಿಕೆ ಹಾಗೂ ನಗರಸಭೆಗಳಲ್ಲಿ ನೇರ ಪಾವತಿಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಸೂಚನೆ ಇರುತ್ತದೆ. ಅದರಂತೆ ನೇರ ಪಾವತಿಯಡಿ ಪೌರಕಾರ್ಮಿಕರನ್ನು ನೇಮಕ ಮಾಡುವ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಪೌರಕಾರ್ಮಿಕರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು
ಈ ವೇಳೆ ಕರ್ನಾಟಕ ರಾಜ್ಯ ಪೌರಕಾರ್ಮಿಕ ಸಂಘ (ರಿ) ಅಧ್ಯಕ್ಷ ಡಿ.ಆರ್.ರಾಜು, ಮಂಜುನಾಥ್ , ಮಂಚಯ್ಯ , ದಿನೇಶ್ ಕುಮಾರ್, ಹರೀಶ್, ಕಮಲ್, ಅರುಣ್ ಕುಮಾರ್ , ಎಲ್ ಐಸಿ ಮುರಗೇಶ್, ಬ್ಯಾಂಕ್ ರಂಗಣ್ಣ, ಶಿವು ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: fill ,vacant, posts , Corporations, Municipalities, Request, Mysore DC
The post ಪಾಲಿಕೆ, ನಗರಸಭೆಗಳಲ್ಲಿ ನೇರ ಪಾವತಿಯಡಿ ಖಾಲಿ ಹುದ್ದೆಗಳ ಭರ್ತಿ ಮಾಡಿ- ಜಿಲ್ಲಾಧಿಕಾರಿಗೆ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





