ಬೆಂಗಳೂರು,ಅಕ್ಟೋಬರ್,8,2025 (www.justkannada.in): ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಬಂದ್ ಮಾಡಲಾಗಿರುವ ಜಾಲಿವುಡ್ ಸ್ಟುಡಿಯೋಗೆ 10 ದಿನಗಳ ಸಮಯಾವಕಾಶ ನೀಡುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರೇಂದ್ರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ನರೇಂದ್ರಸ್ವಾಮಿ, ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ ಸ್ಥಳ ಮಹಜರು ಮಾಡಿ ನೋಟಿಸ್ ನೀಡಿದ್ದೇವೆ ನಮಗೆ ಇದುವರೆಗೆ ಯಾವುದೇ ಮನವಿ ಬಂದಿಲ್ಲ ಎಂದರು.
ಜಿಲ್ಲಾಧಿಕಾರಿಗೆ ಗೆ ಜಾಲಿವುಡ್ ಮನವಿ ಸಲ್ಲಿಸಿರುವ ಬಗ್ಗೆ ಗೊತ್ತಿಲ್ಲ, ಬಿಗ್ ಬಾಸ್ ಜಾಲಿವುಡ್ ಸ್ಟುಡಿಯೋ ಓಪನ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಬಿಗ್ ಬಾಸ್ ಪರನೂ ಅಲ್ಲ ವಿರೋಧನೂ ಅಲ್ಲ. ದಂಡ ಏನಿದೆ ಚೆಕ್ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
Key words: No decision, opening , Jollywood studio, KSPCB, Narendra Swamy
The post ಜಾಲಿವುಡ್ ಸ್ಟುಡಿಯೋ ಓಪನ್ ಬಗ್ಗೆ ನಿರ್ಧರಿಸಿಲ್ಲ: ಯಾವುದೇ ಮನವಿಯೂ ಬಂದಿಲ್ಲ- ಕೆಎಸ್ ಪಿಸಿಬಿ ಅಧ್ಯಕ್ಷ ನರೇಂದ್ರ ಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





