ಬೆಂಗಳೂರು, ಅಕ್ಟೋಬರ್,8,2025 (www.justkannada.in): ಜಾಲಿವುಡ್ ಸ್ಟುಡಿಯೋ ಬಂದ್ ಮಾಡಿರುವುದಕ್ಕೆ ತಮ್ಮ ಹೆಸರು ತಳಕು ಹಾಕಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನನ್ನ ಬಗ್ಗೆ ಮಾತಾಡಿಲ್ಲ ಅಂದರೆ ಕುಮಾರಸ್ವಾಮಿಗೆ ನೆಮ್ಮದಿ ಇಲ್ಲ ನನ್ನ ಸುದ್ದಿ ಮಾತಾನಾಡಿಲ್ಲ ಅಂದರೆ ನಿದ್ದೆನೂ ಬರಲ್ಲ. ನಾನೇ ಡಿಸಿ ಮತ್ತು ಎಸ್ ಪಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ಅವಕಾಶ ಕೊಡಿ ಎಂದಿದ್ದೇನೆ ಎಂದರು.
ಜಾಲಿವುಡ್ ಸ್ಟುಡಿಯೋವನ್ನ ನಾನೇ ಉದ್ಘಾಟಿಸಿದ್ದೆ. ಬಿಗ್ ಬಾಸ್ ಆಗಲಿ ಯಾವುದೇ ಆಗಲಿ ಮನರಂಜನೆ ಬೇಕು. ಏನೇ ಇದ್ದರೂ ಸರಿ ಒಂದು ಅವಕಾಶ ಕೊಡಿ ನಮ್ಮಲ್ಲಿ ಮನರಂಜನೆ ಮುಖ್ಯ . ಡಿಸಿ ಎಸ್ಪಿಗೆ ನಾನು ಫೋನ್ ಮಾಡಿ ಹೇಳಿದ್ದೇನೆ ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ಅವಕಾಶ ಕೊಡಿ ಎಂದಿದ್ದೇನೆ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು ಎಂದರು.
Key words: Big boss, HDK, DCM, DK Shivakumar
The post ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಹೆಚ್ ಡಿಕೆಗೆ ನೆಮ್ಮದಿಯೂ ಇಲ್ಲ. ನಿದ್ದೆನೂ ಬರಲ್ಲ- ಡಿಕೆ ಶಿವಕುಮಾರ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





