14
March, 2026

A News 365Times Venture

14
Saturday
March, 2026

A News 365Times Venture

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ- ಸಚಿವ ಕೆ.ವೆಂಕಟೇಶ್

Date:

ಮೈಸೂರು,ಜುಲೈ,19,2025 (www.justkannada.in): ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುತ್ತಾರೆಂದು ಬಿಜೆಪಿ ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ನುಡಿದರು.

ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್ , ಎಲ್ಲಾ ಜಿಲ್ಲೆಗಳಂತೆ ಮೈಸೂರು‌ ಜಿಲ್ಲೆಯಲ್ಲೂ ಸಾಧನಾ ಸಮಾವೇಶ ಮಾಡಿದ್ದೇವೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಪ್ರತಿ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ‌. ಅವರಿಗೆ ಉತ್ತರ ನೀಡಲು ಎಲ್ಲಾ ಜಿಲ್ಲೆಗಳಲ್ಲೂ ಸಾಧನಾ ಸಮಾವೇಶ ಮಾಡುತ್ತಿದ್ದೇವೆ. ನಮ್ಮ ಮೇಲೆ ಆರೋಪಿಸಲು ಅವರಿಗೆ ವಿಷಯಗಳೇ ಇಲ್ಲ. ನಮ್ಮ ಸಾಧನೆಗಳನ್ನು ಮನವರಿಕೆ ಮಾಡಿಕೊಡಲು ಸಮಾವೇಶ ಮಾಡಿದ್ದೇವೆ‌ ಎಂದರು.

ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರದಲ್ಲಿ ಮುಳುಗಿದ್ದರು‌. ಈಗಲೂ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಜನರ ಕಷ್ಟ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂದು ಬಿಜೆಪಿ ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಸಚಿವ ಕೆ ವೆಂಕಟೇಶ್ ಹೇಳಿದರು.vtu

Key words: guarantee plan, not, stop, Minister, K. Venkatesh

The post ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ- ಸಚಿವ ಕೆ.ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

"நடிகர் ரஜினிகாந்தை யாரும் மிரட்ட முடியாது; எந்த மிரட்டலுக்கும் அவர் அடிபணிய மாட்டார்!" – ரகுபதி

புதுக்கோட்டையில் செய்தியாளர்களை சந்தித்த அமைச்சர் ரகுபதி,"நடிகர் ரஜினிகாந்தை யாரும் மிரட்ட முடியாது....

Sachin Tendulkar: సచిన్ రిటైర్మెంట్ వెనుక ఇంత కథ ఉందా.. డ్రెస్సింగ్ రూంలోనే ప్లాన్..?

క్రికెట్ ప్రపంచంలో ‘దేవుడు’గా పిలవబడే సచిన్ టెండూల్కర్ పేరు వినగానే పరుగుల...

ಭೀಕರ ಅಪಘಾತದಲ್ಲಿ ಮೂವರು ಸಾವು.

ಮಂಗಳೂರು, ಮಾರ್ಚ್,13,2026 (www.justkannada.in): ಕೆಎಸ್ ಆರ್ ಟಿಸಿ ರಾಜಹಂಸ ಬಸ್...

ഗസയിലെ വംശഹത്യ; ഐ.സി.ജെയിലെ കേസില്‍ കക്ഷി ചേര്‍ന്ന് നെതര്‍ലാന്‍ഡ്‌സും ഐസ്‌ലാന്‍ഡും

ഹേഗ്: ഗസയില്‍ ഇസ്രഈല്‍ നടത്തുന്ന വംശഹത്യ സംബന്ധിച്ച് ഹേഗിലെ അന്താരാഷ്ട്ര നീതിന്യായ...