ನವದೆಹಲಿ,ಜುಲೈ,25,2026 (www.justkannada.in): ಧರ್ಮೇಂದ್ರ ಪ್ರಧಾನ್ ಗೆ ಬೇರೆ ಇಲಾಖೆ ಕೊಟ್ಟರೇ ಸಹಿಸುವುದಿಲ್ಲ ಸಚಿವ ಸ್ಥಾನದಿಂದಲೇ ಅವರನ್ನ ವಜಾ ಮಾಡಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಾಹುಲ್ ಗಾಂಧಿ, ಧರ್ಮೇಂದ್ರ ಪ್ರಧಾನ್ ಭ್ರಷ್ಟಾಚಾರದ ಸಂಕೇತ. ಅವರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಿ. ಅವರು ಯಾವುದೇ ಕಾರಣಕ್ಕೂ ಸಚಿವ ಸ್ಥಾನದಲ್ಲಿ ಇರಬಾರದು ಎಂದರು.
ವಿದ್ಯಾರ್ಥಿಗಳುಮೂರು ಬೇಡಿಕೆ ಇಟ್ಟಿದ್ದಾರೆ. ಮೂರು ಬೇಡಿಕೆಗಳ ವಿಚಾರದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಧರ್ಮೇಂಧ್ರ ಪ್ರಧಾನ್ ರಾಜೀನಾಮೆ ನಿಡಲೇಬೇಕು ಪ್ರಧಾನ್ ಗೆ ಬೇರೆ ಇಲಾಖೆ ಜವಾಬ್ದಾರಿ ಕೊಟ್ಟರೇ ಸಹಿಸಲ್ಲ. ಬೇರೆ ಖಾತೆ ನಿಡಿದರೇ ಒಪ್ಪುವುದಿಲ್ಲ. ಸಂವಿಧಾನದ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಪ್ರತಿಭಟನಾ ಸ್ಥಳದಿಂದ ವಿದ್ಯಾರ್ಥಿಗಳನ್ನ ಪೊಲೀಸರು ಓಡಿಸಿದ್ದಾರೆ ಎಂದು ಆರೋಪಿಸಿದರು.
Key words: Dharmendra Pradhan, Remove, ministerial post, Rahul Gandhi
The post ಧರ್ಮೇಂದ್ರ ಪ್ರಧಾನ್ ಗೆ ಬೇರೆ ಇಲಾಖೆ ಕೊಟ್ರೆ ಸಹಿಸಲ್ಲ: ಸಚಿವ ಸ್ಥಾನದಿಂದ ವಜಾ ಮಾಡಿ- ರಾಹುಲ್ ಗಾಂಧಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





