22
February, 2026

A News 365Times Venture

22
Sunday
February, 2026

A News 365Times Venture

ಪತ್ರಕರ್ತರಿಗೆ ಯಶಸ್ವಿನಿ ಆರೋಗ್ಯ ವಿಮೆ: ಮಾ.5ರೊಳಗೆ ಅರ್ಜಿ ಸಲ್ಲಿಸಿ..

Date:

ಮೈಸೂರು,ಫೆಬ್ರವರಿ,21,2026 (www.justkannada.in): ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದಿಂದ ಈಗಾಗಲೇ ಯಶಸ್ವಿನಿ ವಿಮೆ ಪಡೆದಿರುವ ಸದಸ್ಯರಿಗಾಗಿ ನವೀಕರಣ ಮತ್ತು ಹೊಸದಾಗಿ ವಿಮೆ ಪಡೆಯಲು ಬಯಸಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

2025- 26ನೇ ಸಾಲಿನಲ್ಲಿ ಸದರಿ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗರಿಷ್ಠ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ. 1000 ರೂ. ವಂತಿಕೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ. 20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ  ರೂ. 200 ರೂ. ಪಾವತಿಸತಕ್ಕದ್ದು. ಪರಿಶಿಷ್ಟ ಜಾತಿ/ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವ ವಂತಿಕೆಯನ್ನು ಸರ್ಕಾರವೇ ಭರಿಸುತ್ತದೆ.

ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಸದಸ್ಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಂಘದ ಕಚೇರಿಯಲ್ಲಿ ದೊರಕುವ ಅರ್ಜಿ ನಮೂನೆಯನ್ನು. ಪಡೆದು, ಅಗತ್ಯ ದಾಖಲೆಗಳು ಮತ್ತು ಶುಲ್ಕದೊಂದಿಗೆ ಮಾರ್ಚ್ 5 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್ ದೂರವಾಣಿ ಸಂಖ್ಯೆ : 9741511340, 91 91081 74008  ಸಂಪರ್ಕಿಸುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದ್ದಾರೆ.

Key words: Yashaswini, Health Insurance,  Journalists, Apply

The post ಪತ್ರಕರ್ತರಿಗೆ ಯಶಸ್ವಿನಿ ಆರೋಗ್ಯ ವಿಮೆ: ಮಾ.5ರೊಳಗೆ ಅರ್ಜಿ ಸಲ್ಲಿಸಿ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

NTK: "தேர்தல் அரசியலில்… இரண்டு கட்சிகளும் வெவ்வேறு அல்ல" – திருச்சி மாநாட்டில் சீமான் உரை

'மாற்றத்தை விரும்பும் மக்கள் மாநாடு' என்ற தலைப்பில் நாம் தமிழர் கட்சியின்...

Off The Record : కరీంనగర్ మున్సిపల్ కార్పొరేషన్‌లో హస్తం ఉల్టా

Off The Record : ఉమ్మడి కరీంనగర్ జిల్లాలో మున్సిపల్‌ ఎన్నికల్లో...

CS ಶಾಲಿನಿ ರಜನೀಶ್ ಬಳಿ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ

ಬೆಂಗಳೂರು,ಫೆಬ್ರವರಿ,21,2026 (www.justkannada.in):  ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ದ...

കോടതി വിധി അമേരിക്കന്‍ വിരുദ്ധം, പരിഹാസ്യം; ആഗോള തീരുവ 10 അല്ല 15 ശതമാനമാക്കുമെന്ന് ട്രംപ്

വാഷിങ്ടണ്‍: ലോകരാജ്യങ്ങള്‍ക്ക് മേല്‍ അമിതമായി തീരുവ ചുമത്താനുള്ള അധികാരമില്ലെന്ന യു.എസ് സുപ്രീംകോടതി...