ಮೈಸೂರು,ನವೆಂಬರ್,1,2025 (www.justkannada.in): ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು ಈ ಬಗ್ಗೆ ಮೈಸೂರಿನಲ್ಲಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ನಾನು ಸ್ಪೀಕರ್ ಆಗಿದ್ದೇನೆ. ಯಾವ ಕ್ರಾಂತಿ ಬಗ್ಗೆಯೂ ನನಗೆ ಗೊತ್ತಿಲ್ಲ. ಡಿಸೆಂಬರ್ 8 ರಿಂದ ಅಧಿವೇಶನ ಶುರು ಆಗತ್ತೆ. ಅದನ್ನಷ್ಟೇ ನಾನು ಹೇಳಬಲ್ಲೆ ಎಂದರು.
ನೀವು ಮಂತ್ರಿ ಆಗ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು. ಟಿ ಖಾದರ್, ಸದ್ಯಕ್ಕೆ ನಾನು ಸ್ಪೀಕರ್. ಮಂತ್ರಿ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಪಕ್ಷದ ವಿಚಾರ ನನಗೇನೂ ಗೊತ್ತಿಲ್ಲ ಎಂದರು.
ಶಾಸಕರು ಸಚಿವರ ಡಿನ್ನರ್ ಪಾರ್ಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ನನ್ನನ್ನು ಯಾರು ಕರೆದಿಲ್ಲ. ಕರೆದರೆ ನಾನು ಡಿನ್ನರ್ ಗೆ ಹೋಗುತ್ತೇನೆ ಎಂದರು.
Key words: Speaker, UT Khader, November Revolution, Mysore
The post ನವೆಂಬರ್ ಕ್ರಾಂತಿ, ಮಂತ್ರಿಗಿರಿ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು ಹೀಗೆ..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





