ಮೈಸೂರು,ಅಕ್ಟೋಬರ್,31,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿಯಾಗಿದ್ದು ಸರಗೂರು ತಾಲ್ಲೂಕಿನ ಕುರ್ಣೇಗಾಲದಲ್ಲಿ ವ್ಯಕ್ತಿ ಹುಲಿ ದಾಳಿಯಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಕೂಡಗಿ ಗ್ರಾಮದ ನಿಂಗಯ್ಯ(65) ಹುಲಿ ದಾಳಿಗೆ ಬಲಿಯಾದವರು. ಇಂದು ಕಾಡಂಚಿನ ಗ್ರಾಮ ಸರಗೂರು ತಾಲ್ಲೂಕಿನ ಕುರ್ಣೇಗಾಲದಲ್ಲಿ ನಿಂಗಯ್ಯ ಹಸು ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿದ್ದು ನಿಂಗಯ್ಯ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ದೌಡಾಯಿಸಿದ್ದಾರೆ.
ಸರಗೂರು ತಾಲ್ಲೂಕಿನಲ್ಲೇ ಐದು ದಿನಗಳ ಅಂತರದಲ್ಲಿ ಎರಡು ಹುಲಿ ದಾಳಿ ಪ್ರಕರಣಗಳು ವರದಿಯಾಗಿದೆ. ಇತ್ತೀಚೆಗೆ ಅಕ್ಟೋಬರ್ 26 ರಂದು ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವವರ ಮೇಲೆ ಹುಲಿ ದಾಳಿಯಾಗಿತ್ತು.
Key words: Another, victim, tiger, attack , Mysore, district
The post ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





