ಬೆಂಗಳೂರು,ಅಕ್ಟೋಬರ್,31,2025 (www.justkannada.in): ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಗದ್ದಲವಾಗಿಲ್ಲ. ಸಂಘರ್ಷವಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ನಿನ್ನೆ ನಡೆದ ಸಂಫುಟ ಸಭೆಯಲ್ಲಿ ಯಾವುದೇ ಗದ್ದಲವಾಗಿಲ್ಲ. ಯಾರ್ ಯಾರಿಗೂ ಗಲಾಟೆಯಾಗಿಲ್ಲ. ಸಂಘರ್ಷವೋ ಜಟಾಪಟಿಯೋ ಆ ರೀತಿ ಏನೂ ಆಗಿಲ್ಲ. ಯಾವುದೇ ವಿಷಯಗಳು ಬಂದಾಗ ಚರ್ಚೆ ಆಗುತ್ತೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.
ಎಸ್ ಸಿಪಿ-ಟಿಎಸ್ ಪಿ ಅನುದಾನ ಹಂಚಿಕೆ ವಿಚಾರವಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಮತ್ತು ಸಚಿವ ಹೆಚ್.ಸಿ ಮಹದೇವಪ್ಪ ನಡುವೆ ನಿನ್ನೆ ಸಂಪುಟ ಸಭೆಯಲ್ಲಿ ಗದ್ದಲವಾಗಿತ್ತು ಎಂದು ವರದಿಯಾಗಿತ್ತು.
ಇನ್ನು ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ನೂರು ವರ್ಷಗಳ ಹಿಂದಿನಿಂದಲೇ ಈ ಹೋರಾಟ ಇದೆ. ಶೈಕ್ಷಣಿಕ ಔದ್ಯೋಗಿಕ ಆರ್ಥಿಕ ರಾಜಕೀಯ, ಅವಕಾಶಗಳಿಗಾಗಿ ಈ ಹೋರಾಟ ಇದ್ದೇ ಇದೆ. ಯಾವಾಗ ತೀರ್ಮಾನ ಮಾಡುತ್ತೋ ಹೈಕಮಾಂಡ್ ಗೆ ಬಿಟ್ಟಿದ್ದು ರಾಜಕೀಯ ಪಕ್ಷದ ಒಳಗೆ ಹೋರಾಟ ಇದ್ದೇ ಇರುತ್ತದೆ ದಲಿತ ಸಿಎಂ ಬಗ್ಗೆ ಹೈಕಮಾಂಡ್ ಹಂತದಲ್ಲಿ ತೀರ್ಮಾನ ಆಗಬೇಕು ಎಂದರು.
Key words: Minister, H.C. Mahadevappa, clarified , cabinet meeting, KJ George
The post ಸಂಪುಟ ಸಭೆಯಲ್ಲಿ ಜಟಾಪಟಿ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





