ಬೆಂಗಳೂರು,ಅಕ್ಟೋಬರ್,25,2025 (www.justkananda.in): ರಾಜ್ಯ ಸರ್ಕಾರದ ಯೋಜನೆ ಬಿ ಖಾತಾದಿಂದ ಎ ಖಾತಾ ಅನ್ನೋದು ಬೋಗಸ್. ಇದರಿಂದ ರಾಜ್ಯದ ಜನರು ಯಾವುದೇ ಕಾರಣಕ್ಕೂ ಮರುಳಾಗಬಾರದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಬಿ ಖಾತಾದಿಂದ ಎ ಖಾತಾ ಯೋಜನೆ ಬೋಗಸ್. ನೀವು ಯಾರು ಕೂಡ ಹಣ ಕಟ್ಟುವ ಅಗತ್ಯವಿಲ್ಲ ಹಿಂದಿನಂತೆ ನಿಮ್ಮ ಆಸ್ತಿ ನಿಮಗೆ ಬರೆಸಿಕೊಡುವ ಜವಾಬ್ದಾರಿ ನಮ್ಮದು ಎಂದು ಜನರಿಗೆ ಅಭಯ ನೀಡಿದರು.
ಖಾತಾ ವಿಚರದಲ್ಲಿ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ರಾಜ್ಯದ ಜನರು ಯಾವುದೇ ಕಾರಣಕ್ಕೂ ಮರುಳಾಗಬಾರದು. ಜೆಡಿಎಸ್ ಪಕ್ಷ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಖಾತಾ ವಿಚಾರಕ್ಕೆ ನೀವು ಮತ್ತೆ ಸಾಲ ಮಾಡಲು ಹೋಗಬೇಡಿ ಕಡಿಮೆ ದರದಲ್ಲಿ ನಿಮ್ಮ ಆಸ್ತಿಯ ಮಾಲೀಕತ್ವ ಮಾಡಿಸಿಕೊಡುತ್ತೇನೆ. ಈ ವಿಚಾರವನ್ನ ನಾನು ಸವಾಲಾಗಿ ಸ್ವೀಕಾರ ಮಾಡುತ್ತೇನೆ ಎಂದು ಹೆಚ್ ಡಿಕೆ ಹೇಳಿದರು.
Key words: B Khata, A Khata, bogus, Union Minister, HDK
The post ಬಿ ಖಾತಾದಿಂದ ಎ ಖಾತಾ ಅನ್ನೋದು ಬೋಗಸ್: ರಾಜ್ಯದ ಜನರು ಮರುಳಾಗಬೇಡಿ- ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





